ಖುಷಿ ರವಿ(: ), ಕನ್ನಡ ಚಲನಚಿತ್ರಗಳಲ್ಲಿ ನಟಿಸುತ್ತಿರುವ ನಟಿ. ಖುಷಿ ನಟಿಸಿದ "ದಿಯಾ"(2020) ಚಿತ್ರವು ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. == ವೈಯಕ್ತಿಕ ಜೀವನ == ಬೆಂಗಳೂರಿನಲ್ಲಿ, ಮದ್ದೂರು ಮೂಲದ ರವಿ ಮತ್ತು ಶೋಭಾ ದಂಪತಿಗಳಿಗೆ ಜನಿಸಿದ ಖುಷಿ, ಬಯೋಟೆಕ್ನಾಲಜಿ ಪದವೀಧರೆ. ರಾಕೇಶ್ ಎಂಬುವರನ್ನು ಮದುವೆಯಾದ ಇವರು, ಹೆಣ್ಣು ಮಗುವೊಂದರ ತಾಯಿ. == ನಟಿಯಾಗಿ == ರಂಗಭೂಮಿಯಲ್ಲಿ ತೊಡಗಿಕೊಂಡ ಖುಷಿ, ಮಂಡ್ಯ ರಮೇಶ್ ನಡೆಸುವ ನಟನ ರಂಗಸಂಸ್ಥೆಯ ಜೊತೆಗೆ ಗುರುತಿಸಿಕೊಂಡವರು. ರಂಗಭೂಮಿಯಿಂದ ಸಿನಿಮಾ ಜಗತ್ತಿಗೆ ಬಂದ ಖುಷಿ ಅವರ ಮೊದಲ ಚಿತ್ರ 2016ರ, ಜ್ಯೋತಿರಾವ್ ಮೋಹಿತ್ ನಿರ್ದೇಶಿಸಿದ "ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ". ಖುಷಿ ಅವರ ಎರಡನೇ ಚಿತ್ರ 2020ರಲ್ಲಿ ತೆರೆಕಂಡ, ಕೆ. ಎ. ಅಶೋಕ ನಿರ್ದೇಶಿಸಿದ, "ದಿಯಾ". ಚಿತ್ರದ ಶೀರ್ಷಿಕೆಯ ಪಾತ್ರ ಮಾಡಿದ ಖುಷಿ, ಪ್ರೇಕ್ಷಕವರ್ಗದಿಂದ 'ದಿಯಾ' ಎಂದೇ ಗುರುತಿಸಿಕೊಂಡರು. ಈ ಚಿತ್ರದ ಮೂಲಕ ಜನಮನ್ನಣೆಗೆ ಪಾತ್ರರಾದರು. 2020ನೇ ವರ್ಷದಲ್ಲಿ, ಅಂತರ್ಜಾಲದಲ್ಲಿ ಬಳಕೆದಾರರು ಅತಿಹೆಚ್ಚು ಹುಡುಕಾಡಿದ ಕಲಾವಿದರಲ್ಲಿ ಒಬ್ಬರಾಗಿ ಟ್ರೆಂಡಿಂಗ್ ನಲ್ಲಿದ್ದರು. == ಚಿತ್ರಗಳು == == ಉಲ್ಲೇಖಗಳು ==